ರಚನೆ:ಜಗನ್ನಾಥದಾಸರು
ರಾಗ:ಪಂತುವರಾಳಿ
ತಟಿತ್ಕೋಟಿ ನಿಭಕಾಯ ಜಗನ್ನಾಥ
ವಿಠ್ಠಲಯ್ಯ ವಿಠ್ಠಲಯ್ಯ

ಭಜಿಸುವಿ ನಿನ್ನನು ಅಜಭವಸುರನುತ
ಭಜಕಾಮಿತರು ಕುಜನಕುಠಾರಿ ||೧||

ನೀ ಕರುಣಿಸದೇ ನಿರಾಕರಿಸಲು ಎನ್ನ
ಸಾಕುವರಾರೋ ದಯಾಕರ ಮೂರುತಿ ||೨||

ಶರಣಾಗತರನು ಪೊರೆವನೆಂಬೋ ತವ
ಬಿರುದು ಕಾಣೋ ಸಿರಿ ವರದ ಜಗನ್ನ್ನಾಥ ||೩||

ವರ್ಗ: ಜಗನ್ನಾಥದಾಸರ ಸಾಹಿತ್ಯ